ನೀ ಇಲ್ಲದೇ 2011 ರ ಕನ್ನಡ ಭಾಷೆಯ ಪ್ರಣಯ ಪ್ರಕಾರದ ಚಲನಚಿತ್ರವಾಗಿದ್ದು, ರಘು ಮುಖರ್ಜಿ ಮತ್ತು ಪೂಜಾ ಗಾಂಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಶಿವ ಗಣಪತಿ ನಿರ್ದೇಶಿಸಿ ಸಹ-ನಿರ್ಮಾಣ ಮಾಡಿದ್ದಾರೆ, ಛಾಯಾಗ್ರಹಣ ಟಿ. ಸುರೇಂದ್ರ ರೆಡ್ಡಿ ಅವರದ್ದು. ಏಕರುದ್ರಾದೇವಿ ಬ್ಯಾನರ್ ಅಡಿಯಲ್ಲಿ ಚನ್ನಪತಿ ನಾಗಮಲ್ಲೇಶ್ವರಿ ನಿರ್ಮಿಸಿದ್ದಾರೆ. ಆಶ್ಲೇ ಮೆಂಡೋನ್ಕಾ ಮತ್ತು ಅಭಿಲಾಷ್ ಲಾಕ್ರಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು 25 ಮಾರ್ಚ್ 2011 ರಂದು ಬಿಡುಗಡೆಯಾಯಿತು. == ಕಥಾವಸ್ತು == ಸಂಗೀತ ಕಲಿಯಲು ನಗರಕ್ಕೆ ಬರುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ. ಸಂಗೀತ ಶಿಕ್ಷಕರ ಪಾತ್ರದಲ್ಲಿ ರಘು ಮುಖರ್ಜಿ ನಟಿಸಿದ್ದಾರೆ. ಕಥೆಯು ಶಿಕ್ಷಕ ಮತ್ತು ವಿದ್ಯಾರ್ಥಿಯ ಜೀವನದ ಸುತ್ತ ಸುತ್ತುತ್ತದೆ. == ಪಾತ್ರವರ್ಗ == ರಘು ಮುಖರ್ಜಿ ಪೂಜಾ ಗಾಂಧಿ ಬುಲೆಟ್ ಪ್ರಕಾಶ್ ಅನಂತ ವೇಲು ಜಯಲಕ್ಷ್ಮಿ ಪೂಜಾಗಾಂಧಿ ಈ ಚಿತ್ರಕ್ಕಾಗಿ ನಿರ್ಮಾಪಕರೊಂದಿಗಿನ ತಮ್ಮ ಬಾಕಿಯನ್ನು ಇತ್ಯರ್ಥಕ್ಕೆ ಸಂಬಂಧಿಸಿದಂತೆ ಭಾರೀ ವಿವಾದಾತ್ಮಕ ಸುದ್ದಿಗೆ ಒಳಗಾಗಿದ್ದರು. ಕರ್ನಾಟಕ ಫಿಲಂ ಅಸೋಸಿಯೇಷನ್‌ನಿಂದ 6 ತಿಂಗಳ ಕಾಲ ನಟನೆಯಿಂದ ಪೂಜಾ ಅವರನ್ನು ನಿಷೇಧಿಸಿದಾಗ ವಿವಾದವು ದೊಡ್ಡ ಮಟ್ಟಕ್ಕೆ ತಲುಪಿತು. == ಧ್ವನಿಮುದ್ರಿಕೆ == == ಉಲ್ಲೇಖಗಳು ==